ಕೋವಿಡ್ -19 ನಿಯಂತ್ರಣಾ ಕ್ರಮಗಳು.
GOVT HRPS MIRKHAL,
ಕೋವಿಡ್ -19 ನಿಯಂತ್ರಣಾ ಕ್ರಮಗಳು.
Dt,27-07-2020.
Assingnment-10
ಆತ್ಮೀಯ ವಿದ್ಯಾರ್ಥಿಗಳೇ ಇಂದು ಕೋವಿಡ್ -19 ಅಂದರೆ ಕೊರೋನಾ ರೋಗವು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಹಲವಾರು ಸಾವು ನೋವುಗಳು ಸಂಭವಿಸಿವೆ. ಆದರೆ ಯಾವುದೇ ರೋಗದ ಪರಿಣಾಮಕ್ಕಿಂತ ರೋಗದ ಭಯದಿಂದ ಜರ್ಜರಿತವಾದ ಮಾನಸಿಕ ಸ್ಥಿತಿಯೂ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಳ್ಳುತ್ತದೆ. ಆದ್ದರಿಂದ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಿದ್ದಲ್ಲಿ ಈ ರೋಗದಿಂದ ದೂರ ಇರಬಹುದು. "ಆರೋಗ್ಯವೇ ಭಾಗ್ಯ "ಎಂಬಂತೆ ಆರೋಗ್ಯಕರ ದೇಹ ಹಾಗೂ ಮನಸ್ಸು ಸಕಲೈಶ್ವರ್ಯ ಕ್ಕಿಂತಲೂ ಶ್ರೇಷ್ಠ. ಅದಕ್ಕಾಗಿಯೇ ಸಧೃಡವಾದ ದೇಹದಲ್ಲಿ ಸಧೃಡವಾದ ಮನಸ್ಸಿನ ನಿರ್ಮಾಣವೇ ಶಿಕ್ಷಣದ ಗುರಿಯಾಗಿದೆ. ಆದ್ದರಿಂದ ತಾವೆಲ್ಲರೂ ಕೂಡ ಯಾವುದೇ ಭಯಗ್ರಸ್ಥ್ ಊಹಾಪೋಹಗಳಿಗೆ ಕಿವಿಗೊಡದೆ, ಧೈರ್ಯವಾಗಿದ್ದು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ.
*ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ.
*ಉಸಿರಾಟಕ್ಕೆ ತೊಂದರೆ ಆಗದ ರೀತಿಯಲ್ಲಿ ಮುಖಗವಸ ಬಳಸಿ.
*ದಿನನಿತ್ಯ ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡಿ.
*ವಯಕ್ತಿಕ ಸ್ವಚ್ಛತೆಗೆ ಗಮನ ಕೊಡಿ.
*ಕೈಗಳನ್ನು ಸರಿಯಾಗಿ ಆಗಾಗ ತೊಳೆಯುತ್ತಿರಿ.
*ಪೌಷ್ಟಿಕ ಆಹಾರ ಸೇವಿಸಿ.
*ರೋಗನಿರೋಧಕ ಶಕ್ತಿ ವೃದ್ಧಿಸುವ ಕಷಾಯ ಸೇವಿಸಿ.
*ಧ್ಯಾನ ಮಾಡಿ.
*ಬೇಗ ಮಲಗಿ ಬೇಗ ಎದ್ದು ಉಲ್ಲಾಸಭರಿತರಾಗಿರಿ. ತಾವೆಲ್ಲರೂ ಕೂಡ ವೈಯಕ್ತಿಕ ಸ್ವಚ್ಛತೆ ಹಾಗೂ ವಯಕ್ತಿಕ ಕಾಳಜಿಯನ್ನು ವಹಿಸಿಕೊಂಡು ಇತರರನ್ನು ಇದನ್ನು ಅನುಸರಿಸಲು ಮಾದರಿಯಾಗಿ.
*ಗುಂಪು ಆಟ ಅಥವಾ ಓಡಾಟ ಮಾಡಬೇಡಿ.
ಬಿಡುವಿನ ಸಮಯವನ್ನು ಓದು ಬರೆಯಲು ಬಳಸುತ್ತ ಜ್ಞಾನ ಹಾಗೂ ಆರೋಗ್ಯವನ್ನು ವೃಧ್ಹಿಸಿಕೊಳ್ಳಿ.
BASAVARAJ MADIWAL
GOVT HRPS MIRKHAL
BASAVAKALYAN
Comments
Post a Comment