Posts
Showing posts from July, 2020
ಕೋವಿಡ್ -19 ನಿಯಂತ್ರಣಾ ಕ್ರಮಗಳು.
- Get link
- X
- Other Apps
GOVT HRPS MIRKHAL, ಕೋವಿಡ್ -19 ನಿಯಂತ್ರಣಾ ಕ್ರಮಗಳು. Dt,27-07-2020. Assingnment-10 ಆತ್ಮೀಯ ವಿದ್ಯಾರ್ಥಿಗಳೇ ಇಂದು ಕೋವಿಡ್ -19 ಅಂದರೆ ಕೊರೋನಾ ರೋಗವು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಹಲವಾರು ಸಾವು ನೋವುಗಳು ಸಂಭವಿಸಿವೆ. ಆದರೆ ಯಾವುದೇ ರೋಗದ ಪರಿಣಾಮಕ್ಕಿಂತ ರೋಗದ ಭಯದಿಂದ ಜರ್ಜರಿತವಾದ ಮಾನಸಿಕ ಸ್ಥಿತಿಯೂ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಳ್ಳುತ್ತದೆ. ಆದ್ದರಿಂದ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಿದ್ದಲ್ಲಿ ಈ ರೋಗದಿಂದ ದೂರ ಇರಬಹುದು. "ಆರೋಗ್ಯವೇ ಭಾಗ್ಯ "ಎಂಬಂತೆ ಆರೋಗ್ಯಕರ ದೇಹ ಹಾಗೂ ಮನಸ್ಸು ಸಕಲೈಶ್ವರ್ಯ ಕ್ಕಿಂತಲೂ ಶ್ರೇಷ್ಠ. ಅದಕ್ಕಾಗಿಯೇ ಸಧೃಡವಾದ ದೇಹದಲ್ಲಿ ಸಧೃಡವಾದ ಮನಸ್ಸಿನ ನಿರ್ಮಾಣವೇ ಶಿಕ್ಷಣದ ಗುರಿಯಾಗಿದೆ. ಆದ್ದರಿಂದ ತಾವೆಲ್ಲರೂ ಕೂಡ ಯಾವುದೇ ಭಯಗ್ರಸ್ಥ್ ಊಹಾಪೋಹಗಳಿಗೆ ಕಿವಿಗೊಡದೆ, ಧೈರ್ಯವಾಗಿದ್ದು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ. *ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. *ಉಸಿರಾಟಕ್ಕೆ ತೊಂದರೆ ಆಗದ ರೀತಿಯಲ್ಲಿ ಮುಖಗವಸ ಬಳಸಿ. *ದಿನನಿತ್ಯ ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡಿ. *ವಯಕ್ತಿಕ ಸ್ವಚ್ಛತೆಗೆ ಗಮನ ಕೊಡಿ. *ಕೈಗಳನ್ನು ಸರಿಯಾಗಿ ಆಗಾಗ ತೊಳೆಯುತ್ತಿರಿ. *ಪೌಷ್ಟಿಕ ಆಹಾರ ಸೇವಿಸಿ. *ರೋಗನಿರೋಧಕ ಶಕ್ತಿ ವೃದ್ಧಿಸುವ ಕಷಾಯ ಸೇವಿಸಿ. *ಧ್ಯಾನ ಮಾಡಿ. *ಬೇಗ ಮಲಗಿ...
‘‘ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿ, ವೃತ್ತಿ ನೈಪುಣ್ಯವನ್ನು ಹೆಚ್ಚಿಸಿಕೊಳ್ಳಬೇಕು,’’
- Get link
- X
- Other Apps
GOVT HRPS MIRKHAL Assignment-9 Work from Home ಅಡಿಯಲ್ಲಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವ ಕುರಿತು ಲೇಖನ .ಬಸವರಾಜ ಮಡಿವಾಳ Dt-27-07-2020 ‘‘ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿ, ವೃತ್ತಿ ನೈಪುಣ್ಯವನ್ನು ಹೆಚ್ಚಿಸಿಕೊಳ್ಳಬೇಕು,’’ ‘‘ಸರಕಾರಿ ಶಾಲೆಯ ಶಿಕ್ಷಕರು ಖಾಸಗಿ ಶಾಲೆ ಶಿಕ್ಷಕರಿಗಿಂತಲೂ ಪ್ರತಿಭಾವಂತರು. ಶಿಕ್ಷಕರಿಗೆ ವೃತ್ತಿ ನೈಪುಣ್ಯ ಹೆಚ್ಚಿಸಿಕೊಳ್ಳುವ ಸಲುವಾಗಿ ಶಿಕ್ಷಣ ಇಲಾಖೆ ನಿರಂತರ ತರಬೇತಿಗಳನ್ನು ನೀಡುತ್ತಿದೆ. ಶಿಕ್ಷಕರು ಇವುಗಳನ್ನು ಸದುಪಯೋಗ ಪಡಿಸಿಕೊಂಡು, ನಿರಂತರ ಅಧ್ಯಯನಶೀಲರಾಗಿ, ಜ್ಞಾನ ಹೆಚ್ಚಿಸಿಕೊಳ್ಳಬೇಕು. ತರಗತಿಗೆ ಬೋಧನೆಗೆ ತೆರಳುವ ಮುನ್ನವೇ ಬೋಧನೆಗೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ಕುತೂಹಲ ತಣಿಸುವ ಸಮರ್ಪಕ ಉತ್ತರಗಳನ್ನು ನೀಡಬಹುದು. ವಿದ್ಯಾರ್ಥಿಗಳಿಗೂ ಶಿಕ್ಷಕರಲ್ಲಿ ಗೌರವ ಭಾವನೆ ಮೂಡುತ್ತದೆ,’’. ‘‘ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ಶುದ್ಧ ಕೈಬರಹದ ತರಬೇತಿ ನೀಡಿದಲ್ಲಿ ಕ್ರಮವಾಗಿ ಸುಧಾರಣೆ ಸಾಧ್ಯ. ಮನೆಯಿಂದ ವಿದ್ಯಾರ್ಥಿಗಳಿಂದ ಪ್ರಾಜೆಕ್ಟ್ ವರ್ಕ್ ಮಾಡಿಸುವುದು. ಶಿಕ್ಷಕರ ಮಾರ್ಗದರ್ಶನ, ಸಲಹೆಗಳನ್ನು ಚಾಚೂ ತಪ್ಪದೆ ಮಗು ಪಾಲಿಸುತ್ತಾನೆ. ಉತ್ತಮ ಶಿಕ್ಷಕನಾದವನು ವಿದ್ಯಾರ್ಥಿಯಲ್ಲಿ ಆಸಕ್ತಿ, ಕ್ರಿಯಾಶೀಲತೆಯೊಂದಿಗೆ ಸೃಜನಾತ್ಮಕತೆಯನ್ನು ಬೆಳೆಸಲು ಪ್ರೋತ್ಸಾಹಿಸುತ್ತಾನೆ. ...