GOVT HRPS MIRKHAL, ಕೋವಿಡ್ -19 ನಿಯಂತ್ರಣಾ ಕ್ರಮಗಳು. Dt,27-07-2020. Assingnment-10 ಆತ್ಮೀಯ ವಿದ್ಯಾರ್ಥಿಗಳೇ ಇಂದು ಕೋವಿಡ್ -19 ಅಂದರೆ ಕೊರೋನಾ ರೋಗವು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಹಲವಾರು ಸಾವು ನೋವುಗಳು ಸಂಭವಿಸಿವೆ. ಆದರೆ ಯಾವುದೇ ರೋಗದ ಪರಿಣಾಮಕ್ಕಿಂತ ರೋಗದ ಭಯದಿಂದ ಜರ್ಜರಿತವಾದ ಮಾನಸಿಕ ಸ್ಥಿತಿಯೂ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಳ್ಳುತ್ತದೆ. ಆದ್ದರಿಂದ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಿದ್ದಲ್ಲಿ ಈ ರೋಗದಿಂದ ದೂರ ಇರಬಹುದು. "ಆರೋಗ್ಯವೇ ಭಾಗ್ಯ "ಎಂಬಂತೆ ಆರೋಗ್ಯಕರ ದೇಹ ಹಾಗೂ ಮನಸ್ಸು ಸಕಲೈಶ್ವರ್ಯ ಕ್ಕಿಂತಲೂ ಶ್ರೇಷ್ಠ. ಅದಕ್ಕಾಗಿಯೇ ಸಧೃಡವಾದ ದೇಹದಲ್ಲಿ ಸಧೃಡವಾದ ಮನಸ್ಸಿನ ನಿರ್ಮಾಣವೇ ಶಿಕ್ಷಣದ ಗುರಿಯಾಗಿದೆ. ಆದ್ದರಿಂದ ತಾವೆಲ್ಲರೂ ಕೂಡ ಯಾವುದೇ ಭಯಗ್ರಸ್ಥ್ ಊಹಾಪೋಹಗಳಿಗೆ ಕಿವಿಗೊಡದೆ, ಧೈರ್ಯವಾಗಿದ್ದು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ. *ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. *ಉಸಿರಾಟಕ್ಕೆ ತೊಂದರೆ ಆಗದ ರೀತಿಯಲ್ಲಿ ಮುಖಗವಸ ಬಳಸಿ. *ದಿನನಿತ್ಯ ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡಿ. *ವಯಕ್ತಿಕ ಸ್ವಚ್ಛತೆಗೆ ಗಮನ ಕೊಡಿ. *ಕೈಗಳನ್ನು ಸರಿಯಾಗಿ ಆಗಾಗ ತೊಳೆಯುತ್ತಿರಿ. *ಪೌಷ್ಟಿಕ ಆಹಾರ ಸೇವಿಸಿ. *ರೋಗನಿರೋಧಕ ಶಕ್ತಿ ವೃದ್ಧಿಸುವ ಕಷಾಯ ಸೇವಿಸಿ. *ಧ್ಯಾನ ಮಾಡಿ. *ಬೇಗ ಮಲಗಿ...
Comments
Post a Comment